Vedanta Bharati

ಪುಣ್ಯಭೂಮಿಯಾದ ಈ ಭರತಖಂಡದಲ್ಲಿ ಆತ್ಮಾನ್ವೇಷಣೆಗಾಗಿ ನಡೆದಷ್ಟು ಪ್ರಯತ್ನಗಳು ಇನ್ನಾವ ರಾಷ್ಟ್ರದಲ್ಲಿಯೂ ನಡೆಯಲಿಲ್ಲ! ಆತ್ಮಾನ್ವೇಷಣೆಯಲ್ಲಿ ಸದಾ ನಿರತರಾದ ಭಾರತೀಯ ಮಹರ್ಷಿಗಳಿಗೆ ಮೊದಲು ಪ್ರತಿಭಾತವಾದದ್ದು ವೇದರಾಶಿ. ಉಪನಿಷತ್‌ಸಹಿತವಾದ ಈ ವೇದರಾಶಿಯು ಸಮುದ್ರದಂತೆ ವಿಶಾಲವೂ, ಅತಿಗಂಭೀರವೂ ಆದದ್ದು. ಈ ಉಪನಿಷತ್‌ಸಿದ್ಧಾಂತವನ್ನು ಆಧರಿಸಿ ಏಕಾತ್ಮವಾದವೆಂಬ ಸೂತ್ರದ ಅಡಿಯಲ್ಲಿ (ವಿಶ್ವಮಾನವರೆಲ್ಲರೂ ಪರಮಾತ್ಮನ ಸ್ವರೂಪರೇ. ನಾನಾರೂಪವಾಗಿ ತೋರುವ ಈ ಪ್ರಪಂಚದ ಮೂಲವೊಂದೇ) ವಿಶ್ವದರ್ಶನಕ್ಕೆ ಒಂದು ಮಹತ್ತರವಾದ ಕೊಡುಗೆಯನ್ನಿತ್ತ ಶಾಂಕರದರ್ಶನವನ್ನು ಜನಮನಕ್ಕೆ ಪರಿಚಯಮಾಡಿಕೊಡುವ ಉದ್ದೇಶದಿಂದ ವೇದಾಂತಭಾರತೀ ಸಂಸ್ಥೆಯು ಸ್ಥಾಪಿಸಲ್ಪಟ್ಟಿದೆ.

ವೇದಾಂತಭಾರತಿಯು ಅದ್ವೈತಕೋಶದ ರಚನೆ, ಶಂಕರಾಚಾರ್ಯರಿಗೆ ಹಾಗೂ ಅದ್ವೈತವೇದಾಂತಕ್ಕೆ ಸಂಬಂಧಪಟ್ಟ ಗ್ರಂಥಗಳ ಪ್ರಕಾಶನ, ಅನುವಾದ, ಪ್ರಾಚೀನ ಶಾಸ್ತ್ರಗಳ ಮತ್ತು ಸಂಸ್ಕೃತದ ರಕ್ಷಣೆಗಾಗಿ ಶಾಸ್ತ್ರಗೋಷ್ಠಿ, ಭಾಷ್ಯಪಾರಾಯಣಸತ್ರ, ಜನಸಾಮಾನ್ಯರಿಗೆ ಶಾಂಕರದರ್ಶನದ ಪರಿಚಯವನ್ನು ಮಾಡಿಕೊಡಲು ಶಾಂಕರಸಂದೇಶಸಪ್ತಾಹ, ಶಾಂಕರಸರಸ್ವತೀ ಸ್ತೋತ್ರಪಠನಮಹಾಭಿಯಾನ, ಭಾರತೀಯ ದರ್ಶನ-ತತ್ತ್ವಶಾಸ್ತ್ರಗಳ ಕುರಿತು ರಾಷ್ಟ್ರಮಟ್ಟದ ವಿಚಾರಸಂಕಿರಣ, ವಿದ್ಯಾರ್ಥಿಗಳಿಗಾಗಿ ವಿವೇಕದೀಪಿನೀ, ವಿವೇಕೋತ್ಕರ್ಷಿಣೀ ಸ್ಪರ್ಧಾ, ಇವೇ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಬರುತ್ತಿದೆ.

 

Yadatore Math

 

Yadatore Sri Yogandeshwara Saraswathi samasthanam in Krishnarajanagar, Mysore District on          the banks of Kaveri is one of many institutions that follow Sri Shankara's tradition. This institution has been contributory in the Spritual, Religious, Cultural and Social Spheres. Read More...